Posts

                  ನವಯುಗದ ವೃತ್ತಿಪರರಿಗೆ ಹೊಸ ಸವಾಲುಗಳು ಮತ್ತು ಅವಕಾಶ New Age Jobs - Challenges and Opportunities ಮುಂದಿನ 25 ವರ್ಷಗಳು ನವಯುಗದ ಕರ್ನಾಟಕದ ವೃತ್ತಿಪರರಿಗೆ ಹೊಸ ಸವಾಲುಗಳು ಮತ್ತು ಅವಕಾಶಗಳ ಬಾಗಿಲುಗಳನ್ನು ಒಮ್ಮೊಟ್ಟಿಗೆ ತೆರೆಯಲಿವೆ. ಡಿಜಿಟಲ್ ಮತ್ತು ಎಐ ತಂತ್ರಜ್ಞಾನಾಧಾರಿತ ಔದ್ಯೋಗಿಕ ಮಾರುಕಟ್ಟೆಯಲ್ಲಿ ವಿಶ್ಲೇಷಣಾತ್ಮಕ ಸಾಮರ್ಥ್ಯ, ಕ್ರಿಯಾಶೀಲ ಆಲೋಚನೆ, ವೈಯುಕ್ತಿಕ ಕ್ಷಮತೆಯ ಅರಿವು, ನಿರಂತರ ಕಲಿಕೆ ಮತ್ತು ನಾಯಕತ್ವದ ಕೌಶಲಗಳು ಅತ್ಯಂತ ಅವಶ್ಯಕ.   ನಾವೀಗ ಇತಿಹಾಸದ ಬಹುದೊಡ್ಡ ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ . ಹೊಸಯುಗದ ತಂತ್ರಜ್ಞಾನ, ಜಗತ್ತಿನ ರೂಪುರೇಷೆಯನ್ನೇ ಬದಲಿಸುತ್ತಲಿದೆ. ಡಿಜಿಟಲ್ ಮಾಧ್ಯಮ, ಅಂತರ್ಜಾಲ ಆಧಾರಿತ ಅನಲಿಟಿಕ್ಸ್, ಕೃತಕ ಬುದ್ಧಿಮತ್ತೆ, ವ್ಯಕ್ತಿಗತ ಮಾರುಕಟ್ಟೆಯ ಅನುಭೂತಿ ಬದುಕಿನ ಎಲ್ಲ ಮಗ್ಗಲುಗಳನ್ನೂ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಉದ್ಯೋಗದ ಸ್ವರೂಪ ಕೂಡ ಬದಲಾಗುತ್ತಿದೆ. ಜನರೇಷನ್ ವೈ ಮತ್ತು ಜೆಡ್ ಅಂದರೆ 1980ರಿಂದ 1994ರವರೆಗೆ ಮತ್ತು 1995ರಿಂದ 2010ರ ನಡುವೆ ಹುಟ್ಟಿದ ಪೀಳಿಗೆಗಳು ಹಿಂದಿನ ಎಲ್ಲ ಪೀಳಿಗೆಗಿಂತಲೂ ಭಿನ್ನ, ವಿಶಿಷ್ಟ. ಜನರೇಷನ್ ವೈ ಅನಾಲಾಗ್‌ನಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ತೆರೆದುಕೊಂಡವರಾದರೆ, ಜನರೇಷನ್ ಜೆಡ್ ಹುಟ್ಟುತ್ತಲೇ ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಹಾಗೂ ಅತಿ